ಓ ನನ್ನ ಚೇತನ

ಕೆ.ವಿ. ಪುಟ್ಟಪ್ಪ

ಓ ನನ್ನ ಚೇತನ

ಆಗು ನೀ ಅನಿಕೇತನ

ರೂಪ ರೂಪಗಳನು ದಾಟಿ

ನಾಮ ಕೋಟಿಗಳನು ಮೀಟಿ

ಎದೆಯ ಬಿರಿಯೆ ಭಾವದೀಟಿ

ಓ ನನ್ನ ಚೇತನ

ಆಗು ನೀ ಅನಿಕೇತನ

ನೂರು ಮತದ ಹೊಟ್ಟ ತೂರಿ

ಎಲ್ಲ ತತ್ವವನೆ ಮೀರಿ

ನಿರ್ದಿಗಂತವಾಗಿ ಏರಿ

ಓ ನನ್ನ ಚೇತನ

ಆಗು ನೀ ಅನಿಕೇತನ

ಎಲ್ಲಿಯೂ ನಿಲ್ಲದಿರು

ಮನೆಯನೆಂದು ಕಟ್ಟದಿರು

ಕೊನೆಯನೆಂದು ಮುಟ್ಟದಿರು

ಓ ಅನಂತವಾಗಿರು

ಓ ನನ್ನ ಚೇತನ

ಆಗು ನೀ ಅನಿಕೇತನ

ಅನಂತ ತಾನ್ ಅನಂತವಾಗಿ

ಅಗುತಿಹನೆ ನಿತ್ಯಯೋಗಿ

ಅನಂತ ನೀ ಅನಂತವಾಗು

ಆಗು ಆಗು ಆಗು ಆಗು

ಓ ನನ್ನ ಚೇತನ

ಆಗು ನೀ ಅನಿಕೇತನ

ನೀವು ಕೂಡ ಕನ್ನಡದಲ್ಲಿ ಬ್ಲಾಗ್‌ ಮತ್ತು ಕಥೆಗಳನ್ನು ಬರೆಯಲು ಬಯಸುತ್ತೀರಾ?
ಇಲ್ಲಿ ಪ್ರಾರಂಭಿಸಿ

ಪರಿಕರಗಳು

ಸಾಲದ ಮಾಸಿಕ ಕಂತು (EMI)

ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.

ಹೆಸರು ಹುಡುಕಿ

ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.

ಕರ್ನಾಟಕ ರಾಜ್ಯ

ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!